Tuesday, April 30, 2013

ನಾಗರಾಜ ನೆಕ್ಕಂಟಿ ಗೆಲುವಿಗಾಗಿ ಅಭಿಮಾನಿಗಳ ದೀಡ್ ನಮಸ್ಕಾರ





ಬಿಎಸ್ ಆರ್  ಕಾಂಗ್ರೆಸ್  ಪಕ್ಷದ ಅಭ್ಯರ್ಥಿ ನಾಗರಾಜ ನೆಕ್ಕಂಟಿ   ಅಭಿಮಾನಿಗಳು ಅವರ ಗೆಲುವಿಗಾಗಿ ದೀಡ್ ನಮಸ್ಕಾರ ಹಾಕಿದರು. ದುರ್ಗಮ್ಮ ಕಟ್ಟೆಯಿಂದ ಗವಿಮಠದ ತನಕ ಈ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಅಪಾರ ಅಭಿಮಾನಿಗಳು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

Saturday, April 27, 2013

ಕೊಪ್ಪಳದಿಂದ ಆಯ್ಕೆಯಾದವರು ಸ್ವಾರ್ಥದ ಆಡಳಿತ ನಡೆಸಿದ್ದಾರೆ : ಅಂಬಿಕಾ ಜಾಲಗಾರ


        ಕೊಪ್ಪಳ : ಇದುವರೆಗೂ ಕೊಪ್ಪಳ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾದವರು ಸ್ವಾರ್ಥದ ಆಡಳಿತ ನೀಡಿ ಜನರನ್ನು ವಂಚಿಸಿದ್ದಾರೆ. ನಿಜಕ್ಕೂ ಕೊಪ್ಪಳ ಅಭಿವೃದ್ಧಿ ಕಾರ್ಯಗಳಿಂದ ದೂರವಿದೆ ಎಂದು ಬಿಎಸ್‌ಆರ್ ಕಾಂಗ್ರೆಸ್‌ನ ಹಿಂದುಳಿದ ವರ್ಗಗಳ ಘಟಕದ ರಾಜ್ಯಾಧ್ಯಕ್ಷೆ ಅಂಬಿಕಾ ಜಾಲಗಾರ ಆರೋಪಿಸಿದರು. ಕೊಪ್ಪಳ ಮೀಡಿಯಾ ಕ್ಲಬ್‌ನಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೊಪ್ಪಳದಲ್ಲಿ ಹಲವಾರು ಜ್ವಲಂತ ಸಮಸ್ಯೆಗಳು ತಾಂಡವವಾಡುತ್ತಿವೆ. ಶಾಸಕರಾಗಿ ಕೆಲಸ ಮಾಡಿದವರು ಕ್ಷೇತ್ರದಲ್ಲಿ ಸ್ವಾರ್ಥಕ್ಕಾಗಿ ಅಽಕಾರ ನಡೆಸಿದ್ದಾರೆಯೇ ಹೊರತು ಜನರ ಕಣ್ಣೀರು ಒರೆಸುವ ಕೆಲಸ ಮಾಡಿಲ್ಲ ಎಂದರು.
        ಬಿಎಸ್‌ಆರ್ ಕಾಂಗ್ರೆಸ್ ಜನಸೇವೆ ಬದ್ಧವಾಗಿದ್ದು, ಪ್ರಾಮಾಣಿಕವಾಗಿ ಕೆಲಸ ಮಾಡುತ್ತದೆ. ರಾಜ್ಯದಲ್ಲಿ ಈಗಾಗಲೇ ಒಂದು ಪ್ರಾದೇಶಿಕ ಪಕ್ಷ ಮುಂಚೂಣಿಯಲ್ಲಿದ್ದರೂ ಅದು ದಕ್ಷಿಣ ಕರ್ನಾಟಕದ ಕೆಲ ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿದೆ. ಉತ್ತರ ಕರ್ನಾಟಕದ ಹೈ.ಕ ಜಿಲ್ಲೆಯಲ್ಲಿ ಉದಯಿಸಿದ ಬಿಎಸ್‌ಆರ್ ಕಾಂಗ್ರೆಸ್ ಪಕ್ಷ ಈ ಭಾಗದ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಪ್ರಾದೇಶಿಕ ಪಕ್ಷವಾಗಿದ್ದು, ಜನತೆ ಪಕ್ಷದ ಕೈ ಹಿಡಿಯಬೇಕು ಎಂದು ಹೇಳಿದರು.
         ಪಕ್ಷದ ಪ್ರಮುಖ ಗುರಿ ವಿಧಾನಸಭಾ ಚುನಾವಣೆಯಾಗಿತ್ತು. ಸ್ಥಳೀಯ ಸಂಸ್ಥೆ ಚುನಾವಣೆ ದಿಢೀರನೆ ಎದುರಾಗಿದ್ದರಿಂದ ಆ ಚುನಾವಣೆಗೆ ನಮ್ಮ ಪಕ್ಷ ಸನ್ನದ್ಧವಾಗಿರಲಿಲ್ಲ. ಜೊತೆಗೆ ಸ್ಥಳೀಯ ಸಂಸ್ಥೆ ಚುನಾವಣೆ ಸಂದರ್ಭದಲ್ಲಿ ಚುನಾವಣಾಽಕಾರಿಗಳ ಮೂಲಕ ಬಿಜೆಪಿ ಸರಕಾರ ಪಕ್ಷದ ಚಿಹ್ನೆಯ ವಿಷಯವಾಗಿ ವಿವಾದ ಸೃಷ್ಟಿಸಿತ್ತು. ಸ್ಥಳೀಯ ಸಂಸ್ಥೆ ಚುನಾವಣೆಗೆ ಸ್ಪಽಸುವುದೇ ಬೇಡ ಎಂಬುದು ಬಿಎಸ್‌ಆರ್ ಕಾಂಗ್ರೆಸ್ ನಿರ್ಧಾರವಾಗಿತ್ತು. ಸ್ಥಳೀಯ ಮುಖಂಡರ, ಕಾರ್ಯಕರ್ತರ ಅಭಿಪ್ರಾಯದ ಮೇರೆಗೆ ಸ್ಪಽಸಬೇಕಾಯಿತು. ಹಲವು ಎಡರು-ತೊಡರುಗಳು ಆ ಸಂದರ್ಭದಲ್ಲಿ ಎದುರಾಗಿದ್ದರಿಂದ ಉತ್ತಮ ಫಲಿತಾಂಶ ದೊರಕಲಿಲ್ಲ ಎಂದು ಅವರು ವಿಶ್ಲೇಷಿಸಿದರು.
          ೨೦೧೩ರ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್‌ಆರ್ ಕಾಂಗ್ರೆಸ್ ಕನಿಷ್ಠ ೯೦ ಸ್ಥಾನಗಳನ್ನು ಗೆಲ್ಲುತ್ತದೆ. ಸರಕಾರ ರಚನೆಯ ಸಂದರ್ಭದಲ್ಲಿ ಹೊಂದಾಣಿಕೆ ಮಾಡಿಕೊಳ್ಳುವುದೋ ಅಥವಾ ವಿರೋಧ ಪಕ್ಷದಲ್ಲಿ ಮುಂದುವರೆಯುವುದೋ ಎಂಬುದನ್ನು ಪಕ್ಷದ ವರಿಷ್ಠರು ನಿರ್ಣಯಿಸುತ್ತಾರೆ. ಚುನಾವಣೆಗೂ ಮುನ್ನ ರಾಮುಲು ಅವರು ಯಾವ ಪಕ್ಷದೊಂದಿಗೂ ಹೊಂದಾಣಿಕೆ ಮಾಡಿಕೊಳ್ಳಲು ಮುಂದಾಗಿಲ್ಲ. ವಿವಿಧ ಪಕ್ಷಗಳ ಮುಖಂಡರನ್ನು ಭೇಟಿಯಾಗಿದ್ದು ಕೇವಲ ಸೌಜನ್ಯದ ಭೇಟಿ ಮಾತ್ರ ಎಂದು ಸಮರ್ಥಿಸಿಕೊಂಡರು.
           ಕೊಪ್ಪಳದಲ್ಲಿ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ನೆಕ್ಕಂಟಿ ನಾಗರಾಜ ಅವರಿಗೆ ವ್ಯಾಪಕ ಬೆಂಬಲ ದೊರಕುತ್ತಿದೆ. ಈಗಾಗಲೇ ಹಲವು ಜನ ಕಾರ್ಯಕರ್ತರು ಬಿಜೆಪಿ, ಕಾಂಗ್ರೆಸ್‌ಮ ಜೆಡಿಎಸ್ ತೊರೆದು ಬಿಎಸ್‌ಆರ್ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದಾರೆ. ಇನ್ನೂ ಹಲವು ಗಣ್ಯರು ಪಕ್ಷಕ್ಕೆ ಸೇರುವವರಿದ್ದಾರೆ. ಕ್ಷೇತ್ರದ ಜನರು ರಾಮುಲು ಬಳಗದ ನೆಕ್ಕಂಟಿ ನಾಗರಾಜ ಅವರಿಗೆ ಮತ ನೀಡಬೇಕು ಎಂದು ಅವರು ಮನವಿ ಮಾಡಿದರು.
            ಪತ್ರಿಕಾಗೋಷ್ಠಿಯಲ್ಲಿ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ನೆಕ್ಕಂಟಿ ನಾಗರಾಜ, ಪ್ರಭುಗೌಡ ಮತ್ತಿತರರು ಇದ್ದರು.

Monday, April 22, 2013

ಬಿ.ಜೆ.ಪಿ ಹಾಗೂ ಜೆ.ಡಿಎಸ್ ಪಕ್ಷ ತೊರೆದು ಬಿ.ಎಸ್.ಆರ್ ಪಕ್ಷಕ್ಕೆ ಸೇರ್ಪಡೆ


ಕೊಪ್ಪಳ : ದಿ ೨೧-೦೪-೨೦೧೩ ರಂದು ತಿಗರಿ ಗ್ರಾಮದಲ್ಲಿ ಜೆ.ಡಿ.ಎಸ್ ತೋರೆದು ಬಿ.ಎಸ್.ಆರ್ ಕಾಂಗ್ರೆಸ್ ಪಕ್ಷಕ್ಕೆ ೫೦ ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಮುಖಂಡರು ಸೆರ್ಪಡೆಯಾದರು . ಮಂಜುನಾಥ ಅಂಬಿಗಾರ, ಪ್ರಕಾಶ, ಬಸವರಾಜರಡ್ಡಿ, ಕರೀಮ್‌ಸಾಬ ದೊಡ್ಡಮನಿ, ಗೋವಿಂದಪ್ಪ ಸುಳಾಳಾನೂರ, ಹನುಮೇಶ ಬಾರಕೋಡ, ಸೆರ್ಪಡೆಯಾದರು 
ಈ ಸಂದರ್ಭದಲ್ಲಿ ಪ್ರಭುಗೌಡ ಪಾಟೀಲ ಮಾತನಾಡಿ ಬಿ.ಎಸ್.ಆರ್.ಕಾಂಗ್ರೆಸ್ ಪಕ್ಷ ಅಧಕಾರಕ್ಕೆ ಬರುವುದು ಖಚಿತ ಎಂದು ಹೇಳಿದರು ಕೊಪ್ಪಳ ಕ್ಷೇತ್ರದಿಂದ ಬಿ.ಎಸ್.ಆರ್ ಪಕ್ಷದ ಅಭ್ಯರ್ಥಿಯಾದ ನಾಗರಾಜ ನೆಕ್ಕಂಟಿ ನಾಗರಾಜವರನ್ನು ಅವರಿಗೆ ಮತ ಹಾಕಿ ಹಾರಿಸಿ ತರಬೇಕು  ಎಂದು ಮಾತನಾಡಿದರು. 
ಈ ಸಂದರ್ಬದಲ್ಲಿ ನಾಗೇಶ, ತಿಮ್ಮಪ್ಪ, ರಮೆಶ, ಸುರೇಶ ಸಿಂದನೂರು ನೂರಾರು  ಜನರು ಪಕ್ಷದ ಧುರಿಣರು  ಕಾರ್ಯಕರ್ತರು  ಉಪಸ್ಥಿತರಿದ್ದರು.    

Thursday, April 18, 2013

ಬಿಎಸ್ ಆರ್ ಅಭ್ಯರ್ಥಿ ನೆಕ್ಕಂಟಿ ನಾಗರಾಜ ನಾಮಪತ್ರ ಸಲ್ಲಿಕೆ

ಬಿಎಸ್ ಆರ್ ಅಭ್ಯರ್ಥಿ ನೆಕ್ಕಂಟಿ ನಾಗರಾಜ ನಾಮಪತ್ರ ಸಲ್ಲಿಕೆ


ವಿವಿಧ ಪಕ್ಷಗಳನ್ನು ತೊರೆದು ಬಿ.ಎಸ್.ಆರ್ ಕಾಂಗ್ರೆಸ್‌ಗೆ ಸೇರ್ಪಡೆ


ಕೊಪ್ಪಳ : ಬಿಸಲು ನಾಡು ಕೊಪ್ಪಳ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾದ ನೆಕ್ಕಂಟಿ  ನಾಗರಾಜ ಇವರ ನೇತೃತ್ವದಲ್ಲಿ ನಗರದ ೩ಮತ್ತು ೬ ನೇ ವಾರ್ಡಿನಲ್ಲಿ ಹಾಗೂ ಗ್ರಾಮೀಣ   ಭಾಗದ ಕನಕಾಪೂರ, ಅಗಳಕೇರಿ ಹೊಸಕನಕಾಪೂರ ವಿವಿಧ ಪಕ್ಷಳಾದ ಬಿ.ಜೆ.ಪಿ ಕಾಂಗ್ರೆಸ, ಮತ್ತು ಜೆ.ಡಿ.ಎಸ್ ಪಕ್ಷಗಳನ್ನು ತೊರೆದು ಬಿ.ಎಸ್.ಆರ್ ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತಗಳನ್ನು ಒಪ್ಪಿಕೊಂಡು ಸ್ವಾಭಿಮಾನಿ ಶ್ರೀ ರಾಮುಲರವರ ಅಭಿವೃದ್ದಿ ಕಾರ್ಯಗಳನ್ನು ನೋಡಿ ಪಕ್ಷಕ್ಕೆ ಸೇರ್ಪಡೆಗೊಂಡರು. ಕೊಪ್ಪಳ ನಗರದಲ್ಲಿ ಕಾರ್ಯಕರ್ತರ ಜೊತೆಗೆ ಸೇರಿ ಚರ್ಚಿಸಿ ಬಿ.ಎಸ್.ಆರ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ನಾಗರಾಜ ನೆಕ್ಕಂಟಿಯವರ ಮನೆ ಮನೆಗೆ ತೆರಳಿ ಮತ ಯಾಚನೆ ಮಾಡಲಾಯಿತು.   
ಮುಂದುವರೆದು ಮಾತನಾಡುತ್ತಾ ಬಿ.ಎಸ್.ಆರ್ ಕಾಂಗ್ರೆಸ್ ಮುಂಬರುವ ದಿನಗಳಲ್ಲಿ ಅಧಿಕಾರಕ್ಕೆ ಬರಲಿದೆ ಸ್ವಾಭಿಮಾನಿ ಶ್ರೀರಾಮುಲುರವರ ನೇತೃತ್ವದಲ್ಲಿ ಅಭಿವೃದ್ದಿಯ ಕಾರ್ಯಗಳನ್ನು ದಿನದಲಿತರಿಗಾಗಿ ಹಗಲಿರುಳು ಶ್ರಮಿಸುತ್ತಿರುವ ಬಿ.ಎಸ್.ಆರ್ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಕೆಂದು ಮನವಿ ಮಾಡಿಕೊಂಡರು. ಶ್ರೀರಾಮುಲರವರ ಅಭಿವೃದ್ದಿ ಕಾರ್ಯಗಳಾದ ಆಪ್ತ ಮಿತ್ರನಾದ ೧೦೮ ಅಂಬುಲೇನ್ಸ್, ನಿರೋದ್ಯಗ ಯುವಕರಿಗೆ ಪ್ರತಿ ತಿಂಗಳು ೫ ಸಾವಿರ ರೂಪಾಯಿಗಳ ಸಹಾಯ ಧನ ಹಾಗೂ ಗರ್ಭಿಣಿ ಹೆಣ್ಣು ಮಕ್ಕಳೀಗೆ ೧ ನೇ ತಿಂಗಳಿನಿಂದ ೯ ತಿಂಗಳವರೆಗೆ ಪ್ರತಿ ತಿಂಗಳು ೫ ಸಾವಿರ ರೂಪಾಯಿ ಗರ್ಭಿಣಿ  ಆರೈಕೆಗಾಗಿ ಇರುವ ಇನ್ನೀತರ ಅಭಿವೃದ್ದಿ ಪರ ಕಾರ್ಯಕ್ರಮಗಳನ್ನು ಒಪ್ಪಿಕೊಂಡು ಯುವಕರು ಕಾರ್ಯಕರ್ತರು ಅತ್ಯಂತ ಉತ್ಸಾಹದಿಂದ ಪಕ್ಷವನ್ನು ಸೆರ್ಪಡೆಗೊಂಡರು. 
ಈ ಸಂದರ್ಭದಲ್ಲಿ ಪಕ್ಷದ ತಾಲೂಕ ಅಧ್ಯಕ್ಷರಾದಪ್ರಭುಗೌಡ ಪಾಟೀಲ, ಶಿಲ್ಪಾ ಸಂಗಮ, ಶಾಂತಾ ನಾಯಕ್, ಶಿವನಗೌಡ ಪಾಟೀಲ, ಲಕ್ಷ್ಮೀಪ್ರೀಯಾ, ಬೋರಮ್ಮ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು. 
ಸೇರ್ಪಡೆ ಹೊಸಕನಕಾಪೂರದ ಗೆಳೆಯರ ಬಳಗದ ಸದಸ್ಯರು ಮೌನೇಶ ತಳಬಾಳ, ಗ್ಯಾನಪ್ಪ ಡಂಬಳ, ಯಮನೂರಪ್ಪ ಮುಂಡರಗಿ, ರಮೆಶ ಡಂಬ್ರಳ್ಳಿ, ಶಿವಲಿಂಗಪ್ಪ ವದಗನಾಳ, ಮರ್ಧಾನಲಿ ನಾಯಕ, ಮಂಜುನಾಥ ವಾಲ್ಮೀಕಿ, ನಾಗರಾಜ ಏಳುರು, ಆನಂದ ಎಲಿಗಾರ, ರವಿ ಬಳಿಗಾರ, ಮೌಲಾಹುಸೇನಿ, ಬಸವರಾಜ ಯತ್ನಟ್ಟಿ,  ಸೆರ್ಪಡೆಗೊಂಡರು. 

ದಿನ ದಿನ ಕ್ಕೂ ಹೆಚ್ಚುತ್ತಿರುವ ಬಿ.ಎಸ್.ಆರ್ ಕಾಂಗ್ರೆಸ್ ಪಕ್ಷದ ಪ್ರಚಾರ


ಕೊಪ್ಪಳ :- ಕೊಪ್ಪಳ ವಿಧಾನಸಭಾ ಕ್ಷೇತ್ರ  ಬಿ.ಎಸ್.ಆರ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ನಂಕ್ಕಟಿ ನಾಗರಾಜ ಪರ ಬಿರುಸಿನ ಪ್ರಚಾರ ಬಿಸಲಿನ ನಾಡಿನಲ್ಲಿ ಕಾರ್ಯಕರ್ತರೊಂದಿಗೆ ಮನೆ ಮನೆಗೆ ತೆರಳಿ ಪಕ್ಷದ ಅಬ್ಯರ್ಥಿ ಪರ ಮತಯಾಚನೆ ಮಾಡಲಾಯಿತು.  
ಕಾರ್ಯಕರ್ತರನ್ನು ಉದ್ದೇಶಿಸಿ ಮುಂಬರುವ ದಿನಗಳಲ್ಲಿ ಸ್ವಾಭಿಮಾನಿ ಶ್ರೀರಾಮುಲರವರು ಮುಖ್ಯಂತ್ರಿಗಳಾಗುತ್ತಾರೆ. ಅವರು ದಿನ ದಲಿತರಿಗೆ ಬಡ ಬಂಧುಗಳಿಗೆ, ರೈತ ಬಾಂಧವರಿಗೆ ಯುವ ಮಿತ್ರರಿಗೆ ಬರುವ ದಿನಗಳಲ್ಲಿ ಒಳ್ಳೆಯ ಕೆಲಸವನ್ನು ಮಾಡಲು ಮಾಡುತ್ತಾರೆ. ಈ ಸಂಧರ್ಭದಲ್ಲಿ ಶ್ರೀ ಹುಲಿಗೆಮ್ಮ ದೇವಿಯ ದೇವಸ್ಥಾನ ಭೇಟಿ ಕೊಟ್ಟು ಪೂಜೆ ಪುನಸ್ಕಾರದೊಂದಿಗೆ  ಪ್ರಚಾರದ ಚಾಲನೆ ಕೊಟ್ಟರು. 
ಹುಲಗಿ, ಶಿವಪೂರ, ಮುನಿರಾಬಾದ, ಶಹಾಪೂರ, ಅಗಳಕೇರಿ, ಹಾಲವರ್ತಿ ಗ್ರಾಮಕ್ಕೆ ಭೇಟಿ ಕೊಟ್ಟು ನೂರಾರು ಕಾರ್ಯಕರ್ತರೊಂದಿಗೆ ಮತ ಯಾಚನೆ ಮಾಡಿದರು. 
ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷರಾದ ಪ್ರಭುಗೌಡ ಪಾಟೀಲ, ಕೇಶವ್ ವಾಲ್ಮೀಕಿ, ಖಾಜಾ ಹುಸೇನ, ಹಸನಸಾಬ, ಗವಿಸಿದ್ದಪ್ಪ ಗೊಂಡಬಾಳ, ಮಂಜುನಾಥ ದೊಡ್ಡಮನಿ, ಬಿ.ಎಸ್.ಆರ್. ಕಾಂಗ್ರೆಸ್ ಪಕ್ಷದ ಅಭಿಮಾನಿಗಳು  ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು. 


ಕ್ಷೇತ್ರದ ಅಭಿವೃದ್ಧಿಗೆ ಬಿಎಸ್‌ಆರ್ ಕಾಂಗ್ರೆಸ್ ಬೆಂಬಲಿಸಿ- ನೆಕ್ಕಂಟಿ



ಕೊಪ್ಪಳ, ಏ. ೦೯ : ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಬಿ. ಶ್ರೀರಾಮುಲು ನೇತೃತ್ವದ ಬಿಎಸ್‌ಆರ್ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಕೊಪ್ಪಳ ವಿಧಾನ ಸಭೆ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ನೆಕ್ಕಂಟಿ ನಾಗರಾಜ ಹೇಳಿದರು.
ಅವರು ಮಂಗಳವಾರದಂದು ನಗರದ ೨೦ನೇ ವಾರ್ಡ್‌ನಲ್ಲಿ ಪ್ರಚಾರ ಕೈಗೊಂಡು ರಾಷ್ಟ್ರೀಯ ಪಕ್ಷಗಳಿಂದ ಆಗದ ಕೆಲಸವನ್ನು ಇಂದು ಪ್ರಾದೇಶಿಕ ಪಕ್ಷಗಳು ಯಶಸ್ವಿ ಆಡಳಿತ ನೀಡುತ್ತಾ ಜನಪ್ರಿಯತೆ ಪಡೆದಿವೆ ಹೀಗಾಗಿ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಸಂಸ್ಥಾಪಕ ಹಾಗೂ ರಾಜ್ಯಾಧ್ಯಕ್ಷ ಬಿ.ಶ್ರೀರಾಮುಲು ಅವರು ಕೈಯನ್ನು ಬಲಪಡಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮೌಲಾಹುಸೇಸ್ ಮುದಗಲ್ಲ, ಬಾಬುಲ್ ಖಾಜಿ, ಅಮ್ಜದ ಮುಲ್ಲಾ, ಧ್ರುವಸಾ ಕಲಬುರ್ಗಿ, ಷೆಕ್ಷಾವಲಿ, ಹೈದರಲಿ ಖಾದ್ರಿ, ಮರ್ದಾನ, ರಫಿ, ಸರವರ್, ಆಸೀಫ್, ಕಾಶಿಮಅಲಿ, ಜಿಲಾನಸಾಬ, ಸೇರಿದಂತೆ ವಾರ್ಡಿನ ಅನೇಕರು ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತರ ನಗರ ಘಟಕದ ಅಧ್ಯಕ್ಷ ಖಾಜಾಬಾಷಾಲಾಠಿ ಅವರ ನೇತೃತ್ವದಲ್ಲಿ ಕಾಂಗ್ರೆಸ್ ತೊರೆದು ಬಿಎಸ್‌ಆರ್ ಕಾಂಗ್ರೆಸ್ ಪಕ್ಷಕ್ಕೆ ಸೇರಿದರು.
ಈ ಸಂದರ್ಭದಲ್ಲಿ ತಾಲೂಕಾ ಅಧ್ಯಕ್ಷ ಪ್ರಭುಗೌಡ ಪಾಟೀಲ್, ಮುಖಂಡರಾದ ಬಿ.ಶ್ರೀನಿವಾಸಲು, ರಾಮಲಿಂಗು. ಪಣಿರಾಜ, ಮಹ್ಮದ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.


ವಿವಿಧ ಪಕ್ಷ ತೋರೆದು ಬಿ.ಎಸ್.ಆರ್ ಕಾಂಗ್ರೆಸ್ ಪಕ್ಷಕ್ಕೆ ಸೆರ್ಪಡೆ



ಕೊಪ್ಪಳ :- ಕೊಪ್ಪಳ ತಾಲೂಕಿನ ಬಿ.ಆರ್.ಆರ್ ಕಾಂಗ್ರೆಸ್ ಪಕ್ಷದ ನಿಯೋಜಿತ ಅಭ್ಯರ್ಥಿಯಾದ ನಂಕ್ಕಟಿ ನಾಗರಾಜರವರ ನೇತೃತ್ವದಲ್ಲಿ ಮುನಿರಾಬಾದ, ಹಿರೇಸಿಂದೋಗಿ, ಜಿಲ್ಲಾ ಪಂಚಾಯತಿ ಕ್ಷೇತ್ರದ ಬಿ.ಜೆ.ಪಿ, ಜೆ.ಡಿ.ಎಸ್ , ಕಾಂಗ್ರೆಸ್, ಕೆ.ಜೆ.ಪಿ ಕಾರ್ಯಕರ್ತರು ಶ್ರೀ ರಾಮುಲವರ ತತ್ವ ಸಿದ್ದಾಂತವನ್ನು ನಂಭಿ ಅವರ ಆದರ್ಶವನ್ನು ಅವರ ಮಾಡಿದ ಸಾಧನೆ ನೋಡಿ ಬಿ.ಎಸ್.ಆರ್ ಕಾಂಗ್ರೆಸ್ ಪಕ್ಷಕ್ಕೆ ಸೆರ್ಪಡೆಯಾದರು. 
ಹಿರೇಸಿಂದೋಗಿ ಜಿಲ್ಲಾ ಪಂಚಾಯತಿ ಕ್ಷೇತ್ರದ ಹಲಗೇರಿ, ವದನಾಳ, ಹಂದ್ರಾಳ, ಹನವಾಳ, ಸಿಂದೋಗಿ, ಬಿಸರಹಳ್ಳಿ, ಮಂಗಳಾಪೂರ, ವರತಟ್ನಾಳ, ಕೊಳೂರು, ಕಾತರಕಿ ಗೂಡ್ಲಾನೂರ, ನೀರಲಗಿ, ಗುನ್ನಾಳಿ, ದದೇಗಲ್, ಸಂಚಿರಿಸಿ. ಪಕ್ಷದ ಕಾರ್ಯಕರ್ತರೊಂದಿಗೆ ಪ್ರಚಾರಕ್ಕೆ ಚಾಲನೆ ಕೊಟ್ಟರು. 
ಈ ಸಂದರ್ಭದಲ್ಲಿ ಬಿ.ಎಸ್.ಆರ್ ಕಾಂಗ್ರೆಸ್ ತಾಲೂಕ ಅಧ್ಯಕ್ಷರಾದ ಪ್ರಭುಗೌಡ ಪಾಟೀಲ, ಶ್ರೀರಾಮುಲು ಅವರ ಅಣ್ಣನವರಾದ ಬಿ.ಶ್ರೀನಿವಾಸ್ , ಪಕ್ಷದ ಮುಖಂಡರಾದ ತಿಮ್ಮಪ್ಪ, ಮಹಿಳಾ ಅಧ್ಯಕ್ಷರಾದ ಶಾಂತ ನಾಯ್ಕ, ಬಸಮ್ಮ, ಬೋರಮ್ಮ, ಶಿವನಗೌಡ ಹಲಗೇರಿ. 
ಬಿ.ಎಸ್.ಆರ್. ಕಾಂಗ್ರೆಸ್ ಪಕ್ಷಕ್ಕೆ ಸೆರ್ಪಡೆಯಾದವರು : ರಿಯಾಜ್, ಜುನಾಯಿದ, ಸಲಿಂ, ಇನಾಯಾತ್, ಸುಲೇಮಾನ, ಮಹಮ್ಮದ್ ಸಾಬ, ರಹೇಮಾನ್, ಜಹಿಲುದ್ದಿನ್, ಗೀರಿಜಮ್ಮ, ಹಂದ್ರಾಳ ಗೌಡ್ರು 

ಬಿಎಸ್‌ಆರ್ ಕಾಂಗ್ರೆಸ್ ಅಭ್ಯರ್ಥಿ ನಾಗರಾಜ ನೆಕ್ಕಂಟಿ ಬಿರುಸಿನ ಪ್ರಚಾರ


ಕೊಪ್ಪಳ, ಏ.೦೫ : ಬಿಎಸ್‌ಆರ್ ಕಾಂಗ್ರೆಸ್ ನಿಯೋಜಿತ ಅಭ್ಯರ್ಥಿ ನಾಗರಾಜ ನೆಕ್ಕಂಟಿ ತಾಲೂಕಿನ ವಿವಿದ ಗ್ರಾಮಗಳಲ್ಲಿ ಮತಯಾಚನೆ ಮಾಡುವ ಮೂಲಕ ಬಿಎಸ್‌ಆರ್ ಕಾಂಗ್ರೆಸ್‌ನ್ನು ಹೆಚ್ಚಿನ ಬಹುಮತ ನೀಡಿ ಆರಿಸಿ ತರುವಂತೆ ಮತದಾರರಲ್ಲಿ ಮನವಿ ಮಾಡಿದರು.
ಏ. ೪ ರಂದು ಅಳವಂಡಿ ಜಿಲ್ಲಾ ಪಂಚಾಯತ್ ಕ್ಷೇತ್ರ ವ್ಯಾಪ್ತಿಯ ಮೋರನಾಳ, ಬೆಟಗೇರಿ, ಹನಕುಂಟಿಕುಂಟಿ, ಮತ್ತೂರು, ನೀರಲಗಿ, ಕಾತರಕಿ-ಗುಡ್ಲಾನೂರು, ಡೊಂಬರಹಳ್ಳಿ, ಬೂದಿಹಾಳ ಹಾಗೂ ಬಿಸರಹಳ್ಳಿ ಗ್ರಾಮಗಳಲ್ಲಿ ಪ್ರಚಾರ ನಡೆಸಿದರು. ಈ ಸಂದರ್ಭದಲ್ಲಿ ಬಿಎಸ್‌ಆರ್ ಕಾಂಗ್ರೆಸ್ ಮುಖಂಡ ಬಿ. ಶ್ರೀನಿವಾಸುಲು, ತಾಲೂಕ ಅಧ್ಯಕ್ಷ ಪ್ರಭುಗೌಡ, ಪಕ್ಷದ ಯುವ ನಾಯಕರಾದ ರಾಮು, ಫಣಿರಾಜ್, ರಾಮಲಿಂಗ, ಪಕೀರಪ್ಪ, ಮಹ್ಮದಸಾಬ, ಪಿ.ಸುರೇಶ, ತಿಮ್ಮಪ್ಪ, ಸೇರಿದಂತೆ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.

ಬಿಎಸ್‌ಆರ್ ಕಾಂಗ್ರೆಸ್ ಅಭ್ಯರ್ಥಿ ನಾಗರಾಜ ನೆಕ್ಕಂಟಿ ಬಿರುಸಿನ ಪ್ರಚಾರ


 ಬಿಎಸ್‌ಆರ್ ಕಾಂಗ್ರೆಸ್ ನಿಯೋಜಿತ ಅಭ್ಯರ್ಥಿ ನಾಗರಾಜ ನೆಕ್ಕಂಟಿ ತಾಲೂಕಿನ ವಿವಿದ ಗ್ರಾಮಗಳಲ್ಲಿ ಮತಯಾಚನೆ ಮಾಡುವ ಮೂಲಕ ಬಿಎಸ್‌ಆರ್ ಕಾಂಗ್ರೆಸ್‌ನ್ನು ಹೆಚ್ಚಿನ ಬಹುಮತ ನೀಡಿ ಆರಿಸಿ ತರುವಂತೆ ಮತದಾರರಲ್ಲಿ ಮನವಿ ಮಾಡಿದರು.
ಏ. ೪ ರಂದು ಅಳವಂಡಿ ಜಿಲ್ಲಾ ಪಂಚಾಯತ್ ಕ್ಷೇತ್ರ ವ್ಯಾಪ್ತಿಯ ಮೋರನಾಳ, ಬೆಟಗೇರಿ, ಹನಕುಂಟಿಕುಂಟಿ, ಮತ್ತೂರು, ನೀರಲಗಿ, ಕಾತರಕಿ-ಗುಡ್ಲಾನೂರು, ಡೊಂಬರಹಳ್ಳಿ, ಬೂದಿಹಾಳ ಹಾಗೂ ಬಿಸರಹಳ್ಳಿ ಗ್ರಾಮಗಳಲ್ಲಿ ಪ್ರಚಾರ ನಡೆಸಿದರು. ಈ ಸಂದರ್ಭದಲ್ಲಿ ಬಿಎಸ್‌ಆರ್ ಕಾಂಗ್ರೆಸ್ ಮುಖಂಡ ಬಿ. ಶ್ರೀನಿವಾಸುಲು, ತಾಲೂಕ ಅಧ್ಯಕ್ಷ ಪ್ರಭುಗೌಡ, ಪಕ್ಷದ ಯುವ ನಾಯಕರಾದ ರಾಮು, ಫಣಿರಾಜ್, ರಾಮಲಿಂಗ, ಪಕೀರಪ್ಪ, ಮಹ್ಮದಸಾಬ, ಪಿ.ಸುರೇಶ, ತಿಮ್ಮಪ್ಪ, ಸೇರಿದಂತೆ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.

ಬಿ.ಶ್ರೀರಾಮುಲು ಬಗ್ಗೆ ಜನತೆಯಲ್ಲಿ ಒಲವಿದೆ- ನೆಕ್ಕುಂಟಿ ನಾಗರಾಜ

 ಬಿ.ಎಸ್.ಆರ್. ಕಾಂಗ್ರೆಸ್ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಬಿ. ಶ್ರೀರಾಮುಲುರವರ ಜನಪರ ಕಾರ್ಯಕ್ರಮಗಳನ್ನು ನೀಡಿ ರಾಜ್ಯದ ಜನತೆಯ ಮನಸ್ಸು ಗೆದ್ದಿದ್ದಾರೆ. ಇವರು ಬಿ.ಎಸ್.ಆರ್. ಕಾಂಗ್ರೆಸ್ ಪಕ್ಷ ಸ್ಥಾಪಿಸಿ ರಾಜ್ಯದಲ್ಲಿ ಅನೇಕ ಜನಪರ ಯೋಜನೆಗಳನ್ನು ಜಾರಿಗೊಳಿಸುವುದು ಖಚಿತ, ಬಿ.ಶ್ರೀರಾಮುಲು ಬಗ್ಗೆ ಜನತೆಯಲ್ಲಿ ಒಲವಿದೆ ಎಂದು ಕೊಪ್ಪಳ ವಿಧಾನ ಸಭಾ ಕ್ಷೇತ್ರದ ಬಿ.ಎಸ್.ಆರ್. ಕಾಂಗ್ರೆಸ್ ಅಭ್ಯರ್ಥಿ ನೆಕ್ಕುಂಟಿ ನಾಗರಾಜ ಹೇಳಿದರು. 
ಅವರು ಬುಧವಾರದಂದು ತಾಲೂಕಿನ ಅಳವಂಡಿ, ನೆಲೋಗಿಪುರ, ಕವಲೂರು, ಗುಡಗೇರಿ, ಮುರಲಾಪುರ, ಗಟರಡ್ಡಿಹಾಳ, ಬೆಳಗಟ್ಟಿ, ರಘುನಾಥನಹಳ್ಳಿ, ಕೇಸಲಾಪುರ, ಹಲವಾಗಲಿ, ಕಂಪ್ಲಿ, ಭೈರಾಪುರ ಗ್ರಾಮಗಳಲ್ಲಿ ಮುಖಂಡರನ್ನು ಪಕ್ಷದ ಕಾರ್ಯಕರ್ತರನ್ನು ಭೇಟಿಮಾಡಿ ಮಾತನಾಡಿದರು.
ರಾಜ್ಯದ ಜನತೆಯಲ್ಲಿ ಪ್ರಾದೇಶಿಕ ಪಕ್ಷಗಳ ಬಗ್ಗೆ ಒಲವಿದ್ದು ಈ ಬಾರಿ ಬಿ.ಶ್ರೀರಾಮುಲವರ ನೇತೃತ್ವದ ಬಿ.ಎಸ್.ಆರ್. ಕಾಂಗ್ರೆಸ್ ಪಕ್ಷ ಅಧಿಕ ಸ್ಥಾನಗಳನ್ನು ಗಳಿಸುವದರಲ್ಲಿ ಯಾವುದೇ ಸಂದೇಹವಿಲ್ಲ, ಈಗಾಗಲೇ ಉತ್ತರಕ್ಕಾಗಿ ಉಪವಾಸ, ತುಂಗಭದ್ರ ಹೂಳು ಎತ್ತಲು ಉಪವಾಸ, ಬರ ನಿರ್ವಹಣೆಗೆ ಬಸವಕಲ್ಯಾಣದಿಂದ ಬೆಂಗಳೂರಿನವರೆಗೆ ಪಾದ ಯಾತ್ರೆ ಕೈಗೊಂಡು ರಾಜ್ಯ ಜನತೆಯನ್ನು ಗೆದ್ದಿದ್ದಾರೆ ಈ ಬಾರಿ ರಾಜ್ಯದ ಜನತೆ ಬಿ.ಎಸ್.ಆರ್. ಕಾಂಗ್ರೆಸ್ ಪಕ್ಷವನ್ನು ಆರ್ಶಿವದಿಸಿ ಮತ ನೀಡುವರು ಎಂದರು.
ಈ ಸಂದರ್ಭದಲ್ಲಿ ಬಿ.ಎಸ್.ಆರ್. ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಪ್ರಭುಗೌಡ ಪಾಟೀಲ್, ಪಕ್ಷದ ಮುಖಂಡರಾದ ಬಿ.ಶ್ರೀನಿವಾಸ್, ರಾಮಲಿಂಗ, ಪಕೀರಪ್ಪ, ಮಹ್ಮದ ಸಾಬ, ಪಿ.ಸುರೇಶ, ಪಣಿಕುಮಾರ, ತಿಮ್ಮಪ್ಪ, ಸೇರಿದಂತೆ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.


Welcome


Nekkanti Nagaraj 

BSR Candidate
Koppal