ಕೊಪ್ಪಳ : ಬಿಸಲು ನಾಡು ಕೊಪ್ಪಳ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾದ ನೆಕ್ಕಂಟಿ ನಾಗರಾಜ ಇವರ ನೇತೃತ್ವದಲ್ಲಿ ನಗರದ ೩ಮತ್ತು ೬ ನೇ ವಾರ್ಡಿನಲ್ಲಿ ಹಾಗೂ ಗ್ರಾಮೀಣ ಭಾಗದ ಕನಕಾಪೂರ, ಅಗಳಕೇರಿ ಹೊಸಕನಕಾಪೂರ ವಿವಿಧ ಪಕ್ಷಳಾದ ಬಿ.ಜೆ.ಪಿ ಕಾಂಗ್ರೆಸ, ಮತ್ತು ಜೆ.ಡಿ.ಎಸ್ ಪಕ್ಷಗಳನ್ನು ತೊರೆದು ಬಿ.ಎಸ್.ಆರ್ ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತಗಳನ್ನು ಒಪ್ಪಿಕೊಂಡು ಸ್ವಾಭಿಮಾನಿ ಶ್ರೀ ರಾಮುಲರವರ ಅಭಿವೃದ್ದಿ ಕಾರ್ಯಗಳನ್ನು ನೋಡಿ ಪಕ್ಷಕ್ಕೆ ಸೇರ್ಪಡೆಗೊಂಡರು. ಕೊಪ್ಪಳ ನಗರದಲ್ಲಿ ಕಾರ್ಯಕರ್ತರ ಜೊತೆಗೆ ಸೇರಿ ಚರ್ಚಿಸಿ ಬಿ.ಎಸ್.ಆರ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ನಾಗರಾಜ ನೆಕ್ಕಂಟಿಯವರ ಮನೆ ಮನೆಗೆ ತೆರಳಿ ಮತ ಯಾಚನೆ ಮಾಡಲಾಯಿತು.
ಮುಂದುವರೆದು ಮಾತನಾಡುತ್ತಾ ಬಿ.ಎಸ್.ಆರ್ ಕಾಂಗ್ರೆಸ್ ಮುಂಬರುವ ದಿನಗಳಲ್ಲಿ ಅಧಿಕಾರಕ್ಕೆ ಬರಲಿದೆ ಸ್ವಾಭಿಮಾನಿ ಶ್ರೀರಾಮುಲುರವರ ನೇತೃತ್ವದಲ್ಲಿ ಅಭಿವೃದ್ದಿಯ ಕಾರ್ಯಗಳನ್ನು ದಿನದಲಿತರಿಗಾಗಿ ಹಗಲಿರುಳು ಶ್ರಮಿಸುತ್ತಿರುವ ಬಿ.ಎಸ್.ಆರ್ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಕೆಂದು ಮನವಿ ಮಾಡಿಕೊಂಡರು. ಶ್ರೀರಾಮುಲರವರ ಅಭಿವೃದ್ದಿ ಕಾರ್ಯಗಳಾದ ಆಪ್ತ ಮಿತ್ರನಾದ ೧೦೮ ಅಂಬುಲೇನ್ಸ್, ನಿರೋದ್ಯಗ ಯುವಕರಿಗೆ ಪ್ರತಿ ತಿಂಗಳು ೫ ಸಾವಿರ ರೂಪಾಯಿಗಳ ಸಹಾಯ ಧನ ಹಾಗೂ ಗರ್ಭಿಣಿ ಹೆಣ್ಣು ಮಕ್ಕಳೀಗೆ ೧ ನೇ ತಿಂಗಳಿನಿಂದ ೯ ತಿಂಗಳವರೆಗೆ ಪ್ರತಿ ತಿಂಗಳು ೫ ಸಾವಿರ ರೂಪಾಯಿ ಗರ್ಭಿಣಿ ಆರೈಕೆಗಾಗಿ ಇರುವ ಇನ್ನೀತರ ಅಭಿವೃದ್ದಿ ಪರ ಕಾರ್ಯಕ್ರಮಗಳನ್ನು ಒಪ್ಪಿಕೊಂಡು ಯುವಕರು ಕಾರ್ಯಕರ್ತರು ಅತ್ಯಂತ ಉತ್ಸಾಹದಿಂದ ಪಕ್ಷವನ್ನು ಸೆರ್ಪಡೆಗೊಂಡರು.
ಈ ಸಂದರ್ಭದಲ್ಲಿ ಪಕ್ಷದ ತಾಲೂಕ ಅಧ್ಯಕ್ಷರಾದಪ್ರಭುಗೌಡ ಪಾಟೀಲ, ಶಿಲ್ಪಾ ಸಂಗಮ, ಶಾಂತಾ ನಾಯಕ್, ಶಿವನಗೌಡ ಪಾಟೀಲ, ಲಕ್ಷ್ಮೀಪ್ರೀಯಾ, ಬೋರಮ್ಮ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.
ಸೇರ್ಪಡೆ ಹೊಸಕನಕಾಪೂರದ ಗೆಳೆಯರ ಬಳಗದ ಸದಸ್ಯರು ಮೌನೇಶ ತಳಬಾಳ, ಗ್ಯಾನಪ್ಪ ಡಂಬಳ, ಯಮನೂರಪ್ಪ ಮುಂಡರಗಿ, ರಮೆಶ ಡಂಬ್ರಳ್ಳಿ, ಶಿವಲಿಂಗಪ್ಪ ವದಗನಾಳ, ಮರ್ಧಾನಲಿ ನಾಯಕ, ಮಂಜುನಾಥ ವಾಲ್ಮೀಕಿ, ನಾಗರಾಜ ಏಳುರು, ಆನಂದ ಎಲಿಗಾರ, ರವಿ ಬಳಿಗಾರ, ಮೌಲಾಹುಸೇನಿ, ಬಸವರಾಜ ಯತ್ನಟ್ಟಿ, ಸೆರ್ಪಡೆಗೊಂಡರು.
No comments:
Post a Comment