ಕೊಪ್ಪಳ : ಇದುವರೆಗೂ ಕೊಪ್ಪಳ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾದವರು ಸ್ವಾರ್ಥದ ಆಡಳಿತ ನೀಡಿ ಜನರನ್ನು ವಂಚಿಸಿದ್ದಾರೆ. ನಿಜಕ್ಕೂ ಕೊಪ್ಪಳ ಅಭಿವೃದ್ಧಿ ಕಾರ್ಯಗಳಿಂದ ದೂರವಿದೆ ಎಂದು ಬಿಎಸ್‌ಆರ್ ಕಾಂಗ್ರೆಸ್‌ನ ಹಿಂದುಳಿದ ವರ್ಗಗಳ ಘಟಕದ ರಾಜ್ಯಾಧ್ಯಕ್ಷೆ ಅಂಬಿಕಾ ಜಾಲಗಾರ ಆರೋಪಿಸಿದರು. ಕೊಪ್ಪಳ ಮೀಡಿಯಾ ಕ್ಲಬ್‌ನಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೊಪ್ಪಳದಲ್ಲಿ ಹಲವಾರು ಜ್ವಲಂತ ಸಮಸ್ಯೆಗಳು ತಾಂಡವವಾಡುತ್ತಿವೆ. ಶಾಸಕರಾಗಿ ಕೆಲಸ ಮಾಡಿದವರು ಕ್ಷೇತ್ರದಲ್ಲಿ ಸ್ವಾರ್ಥಕ್ಕಾಗಿ ಅಽಕಾರ ನಡೆಸಿದ್ದಾರೆಯೇ ಹೊರತು ಜನರ ಕಣ್ಣೀರು ಒರೆಸುವ ಕೆಲಸ ಮಾಡಿಲ್ಲ ಎಂದರು.
ಬಿಎಸ್‌ಆರ್ ಕಾಂಗ್ರೆಸ್ ಜನಸೇವೆ ಬದ್ಧವಾಗಿದ್ದು, ಪ್ರಾಮಾಣಿಕವಾಗಿ ಕೆಲಸ ಮಾಡುತ್ತದೆ. ರಾಜ್ಯದಲ್ಲಿ ಈಗಾಗಲೇ ಒಂದು ಪ್ರಾದೇಶಿಕ ಪಕ್ಷ ಮುಂಚೂಣಿಯಲ್ಲಿದ್ದರೂ ಅದು ದಕ್ಷಿಣ ಕರ್ನಾಟಕದ ಕೆಲ ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿದೆ. ಉತ್ತರ ಕರ್ನಾಟಕದ ಹೈ.ಕ ಜಿಲ್ಲೆಯಲ್ಲಿ ಉದಯಿಸಿದ ಬಿಎಸ್‌ಆರ್ ಕಾಂಗ್ರೆಸ್ ಪಕ್ಷ ಈ ಭಾಗದ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಪ್ರಾದೇಶಿಕ ಪಕ್ಷವಾಗಿದ್ದು, ಜನತೆ ಪಕ್ಷದ ಕೈ ಹಿಡಿಯಬೇಕು ಎಂದು ಹೇಳಿದರು.
ಪಕ್ಷದ ಪ್ರಮುಖ ಗುರಿ ವಿಧಾನಸಭಾ ಚುನಾವಣೆಯಾಗಿತ್ತು. ಸ್ಥಳೀಯ ಸಂಸ್ಥೆ ಚುನಾವಣೆ ದಿಢೀರನೆ ಎದುರಾಗಿದ್ದರಿಂದ ಆ ಚುನಾವಣೆಗೆ ನಮ್ಮ ಪಕ್ಷ ಸನ್ನದ್ಧವಾಗಿರಲಿಲ್ಲ. ಜೊತೆಗೆ ಸ್ಥಳೀಯ ಸಂಸ್ಥೆ ಚುನಾವಣೆ ಸಂದರ್ಭದಲ್ಲಿ ಚುನಾವಣಾಽಕಾರಿಗಳ ಮೂಲಕ ಬಿಜೆಪಿ ಸರಕಾರ ಪಕ್ಷದ ಚಿಹ್ನೆಯ ವಿಷಯವಾಗಿ ವಿವಾದ ಸೃಷ್ಟಿಸಿತ್ತು. ಸ್ಥಳೀಯ ಸಂಸ್ಥೆ ಚುನಾವಣೆಗೆ ಸ್ಪಽಸುವುದೇ ಬೇಡ ಎಂಬುದು ಬಿಎಸ್‌ಆರ್ ಕಾಂಗ್ರೆಸ್ ನಿರ್ಧಾರವಾಗಿತ್ತು. ಸ್ಥಳೀಯ ಮುಖಂಡರ, ಕಾರ್ಯಕರ್ತರ ಅಭಿಪ್ರಾಯದ ಮೇರೆಗೆ ಸ್ಪಽಸಬೇಕಾಯಿತು. ಹಲವು ಎಡರು-ತೊಡರುಗಳು ಆ ಸಂದರ್ಭದಲ್ಲಿ ಎದುರಾಗಿದ್ದರಿಂದ ಉತ್ತಮ ಫಲಿತಾಂಶ ದೊರಕಲಿಲ್ಲ ಎಂದು ಅವರು ವಿಶ್ಲೇಷಿಸಿದರು.
೨೦೧೩ರ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್‌ಆರ್ ಕಾಂಗ್ರೆಸ್ ಕನಿಷ್ಠ ೯೦ ಸ್ಥಾನಗಳನ್ನು ಗೆಲ್ಲುತ್ತದೆ. ಸರಕಾರ ರಚನೆಯ ಸಂದರ್ಭದಲ್ಲಿ ಹೊಂದಾಣಿಕೆ ಮಾಡಿಕೊಳ್ಳುವುದೋ ಅಥವಾ ವಿರೋಧ ಪಕ್ಷದಲ್ಲಿ ಮುಂದುವರೆಯುವುದೋ ಎಂಬುದನ್ನು ಪಕ್ಷದ ವರಿಷ್ಠರು ನಿರ್ಣಯಿಸುತ್ತಾರೆ. ಚುನಾವಣೆಗೂ ಮುನ್ನ ರಾಮುಲು ಅವರು ಯಾವ ಪಕ್ಷದೊಂದಿಗೂ ಹೊಂದಾಣಿಕೆ ಮಾಡಿಕೊಳ್ಳಲು ಮುಂದಾಗಿಲ್ಲ. ವಿವಿಧ ಪಕ್ಷಗಳ ಮುಖಂಡರನ್ನು ಭೇಟಿಯಾಗಿದ್ದು ಕೇವಲ ಸೌಜನ್ಯದ ಭೇಟಿ ಮಾತ್ರ ಎಂದು ಸಮರ್ಥಿಸಿಕೊಂಡರು.
ಕೊಪ್ಪಳದಲ್ಲಿ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ನೆಕ್ಕಂಟಿ ನಾಗರಾಜ ಅವರಿಗೆ ವ್ಯಾಪಕ ಬೆಂಬಲ ದೊರಕುತ್ತಿದೆ. ಈಗಾಗಲೇ ಹಲವು ಜನ ಕಾರ್ಯಕರ್ತರು ಬಿಜೆಪಿ, ಕಾಂಗ್ರೆಸ್‌ಮ ಜೆಡಿಎಸ್ ತೊರೆದು ಬಿಎಸ್‌ಆರ್ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದಾರೆ. ಇನ್ನೂ ಹಲವು ಗಣ್ಯರು ಪಕ್ಷಕ್ಕೆ ಸೇರುವವರಿದ್ದಾರೆ. ಕ್ಷೇತ್ರದ ಜನರು ರಾಮುಲು ಬಳಗದ ನೆಕ್ಕಂಟಿ ನಾಗರಾಜ ಅವರಿಗೆ ಮತ ನೀಡಬೇಕು ಎಂದು ಅವರು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ನೆಕ್ಕಂಟಿ ನಾಗರಾಜ, ಪ್ರಭುಗೌಡ ಮತ್ತಿತರರು ಇದ್ದರು.
No comments:
Post a Comment